27 Aug 2013

ದೀಪ ಹಚ್ಚುವ ಹೊತ್ತಾಗಿದೆ

ಮನದ ಬಾಗಿಲಿಗೆ 
ತೋರಣ ಪೋಣಿಸುವ ಹೊತ್ತಲ್ಲೇ
ಇಟ್ಟ ರಂಗವಲ್ಲಿಯ ಮೇಲೆ
ಕೊಳ್ಳಿ ಉರಿಯತೊಡಗಿದೆ..

ಬಸಿದಿಟ್ಟ ಮಲ್ಲಿಗೆಯನ್ನ
ಅವಲಾಗಿದೆ..ಹೂರಣವೂ ಹಳಸಿ..
ಘಮಲೆಲ್ಲ ಕರಗಿ, 
ಬರೀ ಕಮಟು ಕಮಟು..

ನೆನ್ನಿದ್ದವ ಇಂದಿಲ್ಲ..
ಅವನೀಥರ ಹೊರಹೋಗಿಬರುವುದು
ಇದೇ ಮೊದಲಲ್ಲ..
ಮರಳಿ ಬಂದಾಗಲೆಲ್ಲ
ಮತ್ತೆ ಕೊಯ್ದು ತರುತ್ತಿದ್ದೆ..,
ಮಲ್ಲಿಗೆಯನು ಮುಡಿಯಲು-ಹಾಸಲು..
ನಾನೇ ಮಣಿಸಿದರೂ
ಮಣಿದಂತೆ ನಟಿಸುತ್ತಿದ್ದೆ..
ಮರಳಿ ಅಂಗಳಕ್ಕೆ ಕರೆತರಲು..

ಈ ಬಾರಿ ಅವನು ನಡೆದಿದ್ದಾನೆ
ಸಾಕಾಗಿದೆ ನನಗೂ
ನಾ ಹೇಳುವ ಮೊದಲೇ
ಕೈಗಳು ಅಳಿಗೆ ಹಾಕಿವೆ..

ಮೊದಲ ಕೆಲಸವೇ
ಜೇಡನ ಹೊಸಕಿ..
ಗುಡಿಸೊರಸಿ
ಮಿಂದೆದ್ದು
ದೀಪವ ಹಚ್ಚುವುದು..

6 comments:

  1. ಕವನ ಚೆನ್ನಾಗಿದೆ. ಎದ್ದೇಳಬೇಕು ಪುನಃ ..

    ReplyDelete
  2. ಏಯ್ಲ್ ಮಲ್ಲಿ ,
    ಕೇಳೇ ಇಲ್ಲಿ !

    ಯಾಕೋ ಗೊತ್ತಿಲ್ಲ ಕಣೆ , ನೀ ತುಂಬಾ ಹತ್ರುದ್ ಬಾಲ್ಯದ್ ಗೆಳತಿ ಥರಾ ಅನ್ನಿಸ್ತಿ . ಒಮ್ಮೊಮ್ಮೆ ನನ್ನೊಳಗೂ ಉರಿಯೋ ಬೆಂಕಿ , ನಿನ್ನ ಮನೆಯ ಒಲೆಯಲ್ಲಿ ಹತ್ತಿ ಉರಿದು ರೊಟ್ಟಿ ಮಾಡುತ್ತೀ ಅನ್ಸುತ್ತೆ !

    ಎಷ್ಟ್ ಚೆಂದಾಗ್ ಬರೀತಿ ನನ್ನವ್ವ ! ಕುಡ್ದಿದ್ ನೀರು ಗಂಟಲಲ್ ಇಳ್ಯೋ ಹಂಗ ನೀನ್ ಬರ್ದಿದ್ದ್ ಭಾವ ನನ್ನೊಳಕ್ ಸುರ್ಕೊತೈತಿ .!

    ಇಂಥಾ ಪದಗಳ್ ಪಾಡಿಗೆ ,
    ನಿನ್ ಕಣ್ನಂದ ಕಾಡಿಗೆ,
    ನಾ ಕೈ ತಟ್ಟಿ ನಿನ್ ಹಾಡಿಗೆ,
    ಕೊಡ್ತೀನಿ ನಾನೂ ಮನ್ಸಿನ್ ಭಾವ್ನೇನ ಬಾಡಿಗೆ!

    ಕುಸುಮ

    ReplyDelete
  3. ತುಂಬಾ ಚೆನ್ನಾಗಿದೆ ಮಲ್ಲಿ... ನಿಮ್ಮ ಸಾಲುಗಳ ನೋಡಿ ನನ್ನ ಹಳೆಯ ಕವನ ನೆನಪಿಗೆ ಬಂತು...

    ಮುಂಬಾಗಿಲಿಗೆ
    ತೋರಣ ಕಟ್ಟಿ
    ರಂಗವಲ್ಲಿ ಇಡುವ ಹೊತ್ತಿಗೆ
    ತೋರಣದ ಹಸಿರು ಒಣಗಿತ್ತು...

    ಎಂದೋ ಬರೆದಿದ್ದ ಸಾಲು ನಿಮ್ಮಿಂದ ನೆನಪಿಗೆ ಬಂತು.. ನೀವು ವಿಭಿನ್ನ ಶೈಲಿಯ ಕವಯಿತ್ರಿ..

    -ಸುಗುಣ ಮಹೇಶ್

    ReplyDelete
  4. ರಂಗವಲ್ಲಿ ಮೇಲೆ ಉರಿಯೋ ಕೊಳ್ಳಿ ಯಾವತ್ತೂ ಹೆಚ್ಚು ಸಮಯ ಉರಿಯಲ್ಲ ...
    ಅಡಿಯಲ್ಲಿ ಚಿತ್ತಾರವಿದೆ ತಾನೇ...
    ಅದ್ಕೆ ಉರಿಯ ಆಯುಷ್ಯ ಕಮ್ಮಿ ...
    @ನಾದ

    ReplyDelete
  5. ರಂಗವಲ್ಲಿ ಮೇಲೆ ಉರಿಯೋ ಕೊಳ್ಳಿ ಯಾವತ್ತೂ ಹೆಚ್ಚು ಸಮಯ ಉರಿಯಲ್ಲ ...
    ಅಡಿಯಲ್ಲಿ ಚಿತ್ತಾರವಿದೆ ತಾನೇ...
    ಅದ್ಕೆ ಉರಿಯ ಆಯುಷ್ಯ ಕಮ್ಮಿ ...
    @ನಾದ

    ReplyDelete