24 Apr 2013

ಹೊಳೆದುಬಿಡು ಒಮ್ಮೆ..

ನನ್ನ ಚೈತನ್ಯವೇ..
ಎಲ್ಲಿ ಅಡಗಿ ಕುಳಿತಿರುವೆ
ಹೆದರಿ
ನಿದ್ದೆಬಾರದ ರಾತ್ರಿಗಳಲ್ಲಿ
ಸುರಿವ ಕಣ್ಣೀರು ಖಾಲಿಯಾಗಿ 
ಕೊಳ ಒಣಗಿ
ಪಿಸಿರು ಮೂಡಿ
ರೆಪ್ಪೆಗೂದಲು ಬೆಸೆದುಕೊಂಡು 
ತೆರೆಯಲಾಗದ ಕಣ್ಣ ಒಳಗೆ
ಇದ್ದೀಯೆನಿಸುತ್ತದೆ..
ಬೆಳಕಾಗಿದೆ ಹೊರಗೆ..
ಕಣ್ಣು ತೆರೆಯುವ ಪ್ರಯತ್ನ
ನನ್ನದು
ಹೊಳೆಯುವ ಹೊಣೆಗಾರಿಕೆ ನಿನ್ನದು..!

ಕನ್ನಡಿ

ಕನ್ನಡಿ ಒಡೆದು
ಚೂರಾಗಿದೆ ನೂರು..
ಅಯ್ಯಯ್ಯೋ ಎನ್ನಲಾರೆ..
ಚಿಂತಿಲ್ಲ..
ಈಗ ಶಕ್ತಿ 
ಸಾವಿರವಾಗಿ ಹೊಳೆದಿದೆ..


23 Apr 2013

ಮತ್ತೆ.. ಮತ್ತೆ.. ತೇಜಸ್ವಿ..


ಗೆಳೆಯ ಪರಮೇಶ್ವರ್ ಅವರ ಸಾಕ್ಢ್ಯಚಿತ್ರ ‘ಮತ್ತೆ ಮತ್ತೆ ತೇಜಸ್ವಿ’ ನೆನ್ನೆ ನೋಡಿದೆ.. ಸುಚಿತ್ರದಲ್ಲಿ. ಸಾಮಾನ್ಯರಂತೆ ಬದುಕಿದ ತೇಜಸ್ವಿಯ ಅಸಮಾನ್ಯ ಬದುಕು .. ಅಬ್ಬಾ!! ಹಾಗೆ ಬದುಕುವುದು ಒಂದು ತಪಸ್ಸು. ತೇಜಸ್ವಿ ಒಡನಾಡಿಗಳ ಬಾಯಲ್ಲಿ, ಕೆಲವಾರು ಪುಸ್ತಕಗಳಲ್ಲಿ ಅವರ ಬದುಕನ್ನು ಹಿಡಿದಿಡುವ ಪ್ರಯತ್ನಗಳು ನಡೆದಿವೆಯಾದರೂ ಅವುಗಳಲ್ಲಿ ಬಿಟ್ಟುಹೋದ ಅನೇಕ ಅಂಶಗಳು ಸೇರಿರುವುದರೊಂದಿಗೆ ಪರಮೇಶ್ವರರ ಪ್ರಯತ್ನ ಹೊಸದಾಗಿಯೇ ಕಾಣುತ್ತದೆ. ಅಷ್ಟು ಚಂದದ ಕೊಲಾಜ಼್ ಹೆಣೆದಿದ್ದಾರೆ. ಅಲ್ಲಲ್ಲಿ ತೇಜಸ್ವಿಯಾಚೆಗೆ ಮಾತುಗಳು ಹರಿದಾಡಿದರೂ.., ಹಲವುಕ್ಲಿಪ್ಪಿಂಗ್ಸ್ ಗಳು ರಿಪೀಟ್ ಅನ್ನಿಸಿದರೂ, ಇವೆಲ್ಲವುಗಳಿಂದ ನಿರುತ್ತರದೆಡೆಗಿನ ಪ್ರಯಾಣ ಕೊಂಚ ಪ್ರಯಾಸದಾಯಕವಾಯಿತು ಎನಿಸಿದರೂ ತಲುಪಿದ ಸಾರ್ಥಕತೆ ಎಲ್ಲವನ್ನೂ ಮರೆಸುತ್ತದೆ.
ತೇಜಸ್ವಿಯವರ ಬದುಕಿನ ಮ್ಲೈಲಿಗಲ್ಲುಗಳನ್ನು ಮಾತ್ರ ದಾಖಲಿಸಲು ಸಾಧ್ಯವೇ..? ಅವರು ಬದುಕಿನ ಬೆಳಗು-ಬೈಗುಗಳೆಲ್ಲವೂ ಬೆರಗುಗಳೇ..
ಡಿವಿಡಿಗಳನ್ನು ಟೋಟಲ್ ಕನ್ನಡದವರು ಹೊರತಂದಿದ್ದಾರೆ. ಪ್ರತಿಗಳು ಮನೆಮನೆಯಲ್ಲಿ ಸಂಗ್ರಹಿಸಬೇಕಾದದ್ದು..ಮಕ್ಕಳಿಗೆ ನಮ್ಮ ತೇಜಸ್ವಿಯನ್ನು ಪರಿಚಯಿಸಲು..
ಪರಮೇಶ್ವರ್ ಎಂಬ ಯುವಕನೊಬ್ಬನ ಇಂಥಹ ಹಂಬಲಿಕೆಗಳು ನಮ್ಮೊಡನೆ ತೇಜಸ್ವಿಯನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ.. ಲಿಂಕ್ ಮಿಸ್ಸಾಗದಂತೆ..

’ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..’ – ದೀಪಾ ಗಿರೀಶ್ « ಅವಧಿ / avadhi