24 Apr 2013

ಹೊಳೆದುಬಿಡು ಒಮ್ಮೆ..

ನನ್ನ ಚೈತನ್ಯವೇ..
ಎಲ್ಲಿ ಅಡಗಿ ಕುಳಿತಿರುವೆ
ಹೆದರಿ
ನಿದ್ದೆಬಾರದ ರಾತ್ರಿಗಳಲ್ಲಿ
ಸುರಿವ ಕಣ್ಣೀರು ಖಾಲಿಯಾಗಿ 
ಕೊಳ ಒಣಗಿ
ಪಿಸಿರು ಮೂಡಿ
ರೆಪ್ಪೆಗೂದಲು ಬೆಸೆದುಕೊಂಡು 
ತೆರೆಯಲಾಗದ ಕಣ್ಣ ಒಳಗೆ
ಇದ್ದೀಯೆನಿಸುತ್ತದೆ..
ಬೆಳಕಾಗಿದೆ ಹೊರಗೆ..
ಕಣ್ಣು ತೆರೆಯುವ ಪ್ರಯತ್ನ
ನನ್ನದು
ಹೊಳೆಯುವ ಹೊಣೆಗಾರಿಕೆ ನಿನ್ನದು..!

1 comment:

  1. ಕಣ್ಣು ತೆರೆಯುವ ಪ್ರಯತ್ನ
    ನನ್ನದು
    ಹೊಳೆಯುವ ಹೊಣೆಗಾರಿಕೆ ನಿನ್ನದು
    wonderful!

    ReplyDelete